| |
ಸೀತಾನದಿ, ಸ್ವರ್ಣಾನದಿ ಹಾಗೂ ಗುಪ್ತಗಾಮಿನಿಯಾದ ಸರಸ್ವತೀ ನದಿಗಳ ಪವಿತ್ರ ತ್ರಿವೇಣೀ ಸಂಗಮವೇ ಬಾಳೇಕುದ್ರು. "ಕೂಟ 14 ಗ್ರಾಮ" ಎಂದು ಕರೆಯುವ ೧೪ ಗ್ರಾಮದಲ್ಲಿ ಮೊದಲನೆಯದು ಬಾಳೇಕುದ್ರು ಗ್ರಾಮ. ಬದರೀನಾಥ ಕ್ಷೇತ್ರದಲ್ಲಿ ತಪಸ್ಸನ್ನು ಆಚರಿಸಿಕೊಂಡು ನಂತರ ದಕ್ಷಿಣ ತೀರ್ಥಯಾತ್ರೆಗೆಂದು ಬಂದ ಶ್ರೀ ಶ್ರೀ ಕೈವಲ್ಯಾಶ್ರಮ ಸ್ವಾಮಿಗಳ ಪರಂಪರೆ ಶ್ರೀ ಬಾಳೇಕುದ್ರು ಮಠದ ಮೂಲ. ಶ್ರೀಮಠದ ಪರಂಪರೆ ಹರಿ-ಹರರಲ್ಲಿ ಭೇದವೆಣಿಸದ ಭಾಗವತ ಸಂಪ್ರದಾಯ. ಶ್ರೀ ಆದಿಶಂಕರಾಚಾರ್ಯರು ಪ್ರಚಾರಪಡಿಸಿದ ಅದ್ವೈತ ತತ್ವದ ಅನುಯಾಯಿ ಪೀಠವಿದು. ಶ್ರೀ ಕೈವಲ್ಯಾಶ್ರಮ, ಜ್ಞಾನಾಶ್ರಮ, ನಾರಾಯಣಾಶ್ರಮ, ಆನಂದಾಶ್ರಮ ಇವರೇ ಮುಂತಾದವರು ನಮ್ಮ ಗುರುಪೀಠದ ಯತಿವರೇಣ್ಯ ಪ್ರಮುಖರು. ನಮ್ಮ ಮಠದ ಈಗಿನ ಪೀಠಾಧೀಶ್ವರರು ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮಿಗಳವರು. 2006ರಲ್ಲಿ ಪೀಠಕ್ಕೆ ಬಂದ ತರುಣ ಯತಿಗಳಾದ ಶ್ರೀಗಳವರು ಶ್ರೀ ಪೀಠದ ಭವ್ಯತೆ, ಪರಂಪರೆ, ಶಿಷ್ಯರ ಏಳ್ಗೆಗಾಗಿ ವಿಶೇಷ ಪ್ರಯತ್ನ, ನಿರಂತರ ಪ್ರವಾಸ, ವಿನೂತನ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.
|