ಪರಮ ಪೂಜ್ಯ ಶ್ರೀ ಶ್ರೀ ಶ್ರೀ ನೃಸಿಂಹ ಸ್ವಾಮೀಜಿ  
 
2002ರಲ್ಲಿ ಶ್ರೀ ಶಂಕರಾಶ್ರಮ ಸ್ವಾಮಿಗಳು ಮುಕ್ತರಾದರು. ಆನಂತರ ಶ್ರೀ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ, ಕಾಶೀ ಹಾಗು ಶೃಂಗೇರಿಗಳಲ್ಲಿ ವೇದಾಭ್ಯಾಸ ಶಿಕ್ಷಣ ಪಡೆದಿದ್ದ ತರುಣ ಯತಿ ಶ್ರೀ ನೃಸಿಂಹಾಶ್ರಮ ಸ್ವಾಮಿಗಳ ಬಾಳೇಕುದ್ರು ಮಠದ ಪೀಠಾಧಿಪತಿಗಳಾದರು.

ತಾ. 14-6-2006 ವ್ಯಯನಾಮ ಸಂವತ್ಸರದ ಚೈತ್ರ ಕೃಷ್ಣ ಪ್ರತಿಪತ್ ರಂದು ಶ್ರೀಯುತ ಧನಂಜಯ ಉಡುಪರು ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮಿಗಳಾಗಿ ನಿರ್ಜನ ಲೋಕದ ಗುರಿಯನ್ನಿರಿಸಿಕೊಂಡು ಪುನರ್ಜನ್ಮವನ್ನು ಪಡೆದರು. ಈ ಶುಭದಿನವನ್ನು ಪ್ರತಿ ವರ್ಷವೂ ಶ್ರೀಮಠದಲ್ಲಿ "ಪೀಠಾರೋಹಣ ವರ್ಧಂತ್ಯುತ್ಸವ" ಎಂಬುದಾಗಿ ಆಚರಿಸಲಾಗುತ್ತಿದೆ.

ತರುಣರೂ, ವಿದ್ವಾಂಸರೂ, ಮೃದುಭಾಷಿಗಳೂ ಆಗಿರುವ ಶ್ರೀ ನೃಸಿಂಹಾಶ್ರಮ ಸ್ವಾಮಿಗಳವರು ತಮ್ಮ ಸಾತ್ವಿಕ ತೇಜಸ್ಸು, ಧರ್ಮಶ್ರಧ್ಧೆ ಹಾಗು ಸಾಮಾಜಿಕ ಕಳಕಳಿಗಳಿಂದ ಈಗಾಗಲೇ ಶಿಷ್ಯವೃಂದದ ಹೃದಯಗಳನ್ನು ಗೆದ್ದಿದ್ದಾರೆ. ಪೀಠಾರೋಹಣ ಮೊದಲ್ಗೊಂಡು ನಂತರದ ಈ ವರ್ಷಗಳಲ್ಲಿ ಶ್ರೀ ಶ್ರೀ ಗಳವರು ಮಾಡಿರುವ ಸಾಧನೆ ಅಪಾರ. ಶ್ರೀಪೀಠದ ಭವ್ಯತೆ, ಪರಂಪರೆ, ಘನತೆ, ಶಿಷ್ಯರ ಏಳ್ಗೆಗಾಗಿ ವಿಶೇಷ ಪ್ರಯತ್ನ, ನಿರಂತರ ಪ್ರವಾಸ, ವಿನೂತನ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಕಳೆದ ೩-೪-೨೦೦೯ರಿಂದ ೧೦-೪-೨೦೦೯ರವರೆಗೆ ಶ್ರೀಮಠದಲ್ಲಿ ನಡೆಸಿದ ಕೋಟಿ ಗಾಯತ್ರೀ ಮಹಾಯಜ್ಞವನ್ನು ಈ ಸಂಧರ್ಭದಲ್ಲಿ ನೆನಪಿಸಿಕೊಳ್ಳಬಹುದು.







© 2010 ಬಾಳೇಕುದ್ರು ಶ್ರೀಮಠದ ಅಂತರ್ಜಾಲ ತಾಣವು ಶ್ರೀ ಶ್ರೀಗಳ ಚರಣಾರವಿಂದಗಳಿಗೆ Grihasoft ಸಂಸ್ಥೆಯಿಂದ ಅರ್ಪಿತವಾಗಿದೆ. ನಿರ್ಮಾಣ Q-dat IT Solutions 
ಶ್ರೀಮಠದ ಇತಿಹಾಸ ಪರಮಪೂಜ್ಯ ಶ್ರೀಗಳು ಶ್ರೀಮಠದ ದೇವಳಗಳು
ವಿಳಾಸ ಮಾರ್ಗದರ್ಶಿ ವಸತಿ ಸೌಕರ್ಯ