ಯೋಜನೆ ಮತ್ತು ಸೇವೆಗಳು
 
 
 
 
 

ನವೀಕೃತ ಗೋಶಾಲೆ ನಿರ್ಮಾಣ, ವನೌಷಧ ಉದ್ಯಾನ, ನವಗ್ರಹ ಉದ್ಯಾನ, ಅತಿಥಿ ಗೃಹದ ನಿರ್ಮಾಣ, ವೇದಪಾಠ ಶಾಲಾಭವನ, ಆಂಜನೇಯ ದೇವಾಲಯ, ವಿದ್ಯಾದಾನ, ಸಂಜೀವಿನೀ ಯೋಜನೆ - ಇವೇ ಮೊದಲಾದ ಅನೇಕ ಯೋಜನೆಗಳನ್ನು ಶ್ರೀಮಠವು ಬಾಳೇಕುದ್ರುವಿನಲ್ಲಿ ಹಮ್ಮಿಕೊಂಡಿದೆ.

ಅನ್ನ ಸಂತರ್ಪಣೆ : ಶ್ರೀಮಠಕ್ಕೆ ಬರುವ ಎಲ್ಲರಿಗೂ ಅನ್ನ್ನದಾನದ ಯೋಜನೆ.

ಪ್ರಾಚ್ಯ ಗುರುಕುಲ : ಸಾಂಗೋಪಾಂಗ ವೇದವಿದ್ಯಾ ಗುರುಕುಲ.

ನವ್ಯ ಗುರುಕುಲ : ಆಧುನಿಕ ಅವಶ್ಯಕತೆಗಳಿಗೆ ಅನುಗುಣವಾಗಿ ವೇದಾಧ್ಯಯನ, ಪಂಚಮುಖಿ ಶಿಕ್ಷಣ

ಕಾಮಧೇನು : ಗೋವಿಗಾಗಿ ವಿವಧ ಪ್ರಕಲ್ಪಗಳು.

ವಿದ್ಯಾರ್ಥಿಮಿತ್ರ : ಪ್ರತಿಭಾ ಸಂಪನ್ನ ಬಡ ವಿದ್ಯಾರ್ಥಗಳಿಗೆ ಸಹಾಯ

ಜೀವನ-ಸಂಜೀವಿನಿ : ಅತೀ ಕಷ್ಟ ಹಾಗೂ ಬಡತನದಲ್ಲಿ ಇರುವವರಿಗೆ ಸಹಕರಿಸುವುದು.

ಸಂಸ್ಕೃತಿ - ಸಂಪ್ರದಾಯದ ಪ್ರಚಾರ : ಶಂಕರ ಸ್ತೋತ್ರ ಸ್ಪರ್ಧೆ, ಸಾಮೂಹಿಕ ಉಪನಯನ, ಉಪನ್ಯಾಸಗಳು, ವಿದ್ವತ್ ಗೋಷ್ಠಿಗಳು ಹಾಗೂ ಶಿಬಿರಗಳು.



  ಸೇವೆಗಳು
 

ಶಾಶ್ವತ ಪೂಜಾನಿಧಿ : ಭಕ್ತರಿಂದ ತಲಾ ರೂ.೧೦೦೧/- ನಿಧಿಯನ್ನು ಪಡೆದು ಶಾಶ್ವತ ಠೇವಣಿ ಇಟ್ಟು, ದೇಣಿಗೆ ನೀಡಿದವರ ಅನುಕೂಲದ ದಿನದಲ್ಲಿ ತ್ರಿಕಾಲ ಪೂಜೆ ನೆಡೆಸಿ ಪ್ರಸಾದ ತಲುಪಿಸುವ ವ್ಯವಸ್ಥೆ ಇದೆ.


ವ್ಯಾಸವಂದನಾ ನಿಧಿ : ಮನೆಯಲ್ಲಿ ನೆಡೆಯುವ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಗುರುದಕ್ಷಿಣೆಯನ್ನು ತೆಗೆದಿರಿಸಿ, ಮುಖತಃ ಯಾ ಕುಲಪುರೋಹಿತರ ಮೂಲಕ ಶ್ರೀಮಠಕ್ಕೆ ಸಲ್ಲಿಸುವುದು.


ಅಕ್ಷಯನಿಧಿ : ಪ್ರತಿನಿತ್ಯ ಈ ಕೆಳಗಿನ ಶ್ಲೋಕವನ್ನು ಪಠಿಸಿ ಒಂದು ರೂಪಾಯಿಯನ್ನು ಉಳಿಸಿ ಶ್ರೀಗುರು ಪೀಠಕ್ಕೆ ತಲುಪಿಸುವುದು.


ಕುಲಕ್ಷೇಮ ಕಾರ್ಯಕ್ರಮ : ಕುಲದೋಷ ನಿವೃತ್ತಿಗಾಗಿ ಅಥವಾ ಕುಲದ ಶ್ರೇಯಸ್ಸಿಗಾಗಿ ಕುಟುಂಬದ ಸಮಸ್ತರೂ ಒಂದಾಗಿ ಶ್ರೀಮಠದಲ್ಲಿ ವರ್ಷದಲ್ಲಿ ಒಂದುಸಲ ಯಾವುದೇ ಧಾರ್ಮಿಕ ಕಾರ್ಯಕ್ರಮವನ್ನು ನಡೆಸುವುದು.


© 2010 ಬಾಳೇಕುದ್ರು ಶ್ರೀಮಠದ ಅಂತರ್ಜಾಲ ತಾಣವು ಶ್ರೀ ಶ್ರೀಗಳ ಚರಣಾರವಿಂದಗಳಿಗೆ Grihasoft ಸಂಸ್ಥೆಯಿಂದ ಅರ್ಪಿತವಾಗಿದೆ. ನಿರ್ಮಾಣ Q-dat IT Solutions 
ಶ್ರೀಮಠದ ಇತಿಹಾಸ ಪರಮಪೂಜ್ಯ ಶ್ರೀಗಳು ಶ್ರೀಮಠದ ದೇವಳಗಳು
ವಿಳಾಸ ಮಾರ್ಗದರ್ಶಿ ವಸತಿ ಸೌಕರ್ಯ